ಸತ್ಯ ಎಲ್ಲಿದೆ?
ಸತ್ಯ ಇಂದು
ನಾವಾಡುವ ಮಾತಿನಲ್ಲಿಲ್ಲ
ನಮ್ಮ ಕೃತಿಗಳಲ್ಲಿಲ್ಲ
ನಮ್ಮ ಭಾಷೆಯಲ್ಲಿಲ್ಲ
ನಾವೇ ರಚಿಸಿರುವ ಇತಿಹಾಸದಲ್ಲಿಲ್ಲ
ಇಲ್ಲಿ ಎಲ್ಲಡೆಯೂ ಅಡಗಿ ಕುಳಿತಿಹುದು
ಸತ್ಯದ ಮುಖವಾಡ ಹೊತ್ತು
ಸತ್ಯದಂತೆ ಬಿಂಬಿಸುವ ಮಿಥ್ಯ.
ಹಾಗಿದ್ದರೆ ಸತ್ಯ ಎಲ್ಲಿದೆ?
ಸತ್ಯ ಕೃತಿ ರಚಿಸಿದ ವ್ಯಕ್ತಿಯ
ಮನಸ್ಸಿನ ಮೂಲೆಯಲ್ಲೋ
ಅಥವಾ ವ್ಯಕ್ತಿಯ ವ್ಯಕ್ತಿತ್ವದ
ಬೆನ್ನ ಹಿಂದೆ ನೆರಳಾಗಿ
ಕಂಡು ಕಾಣದಂತೆ
ಆಡಗಿ ಕುಳಿತಿದೆ.
ನಮಗೆ ಕಾಣುವುದು, ತಿಳಿಯುವುದು
ಎಲ್ಲವೂ ಅರ್ಧ ಸತ್ಯವೇ ಹೊರತು
ಪೂರ್ಣ ಸತ್ಯವಲ್ಲ..
--ಮಂಜು ಹಿಚ್ಕಡ್
görüntülü
ReplyDeleteucretli show
LVZLVG