Showing posts with label ತುಣುಕುಗಳು. Show all posts
Showing posts with label ತುಣುಕುಗಳು. Show all posts

Monday, July 27, 2020

ಹೊಸತೇಕೆ!




ಕನ್ನಡಿ ಹೊಸತಾದರೇನು
ತೋರುವ ಬಿಂಬ ಹೊಸತೇ !
ರೂಪ ಹೊಸತಾದರೇನು
ನೋಡುವ ನೋಟ ಹೊಸತೇ!

ಬದುಕೇ ಹಳತಾಗಿರುವಾಗ
ಬಯಕೆ ಹೊಸತೇಕೆ ಇನ್ನಾ!
ಇಂದು ಹೊಸತಾದರೇನು
ನಾಳೆ ಹಳತಲ್ಲವೆ ಚಿನ್ನ!

         -- ಮಂಜು ಹಿಚ್ಕಡ್

Sunday, February 23, 2020

ನಿನ್ನೊಲವ ಹರಕೆ

ನೀನು ನನ್ನೊಳಗಿರಲು
ನನ್ನಲೊವ ಪರಿಯೇಕೇ
ನೀ ತಿಳಿಸದಿರಲು ತಿಳಿಯುವುದು
ನಿನ್ನೊಲವ ಬಯಕೆ

ಆತುರದೀ ಆರದಿರು
ಕಾತುರದೀ ಕಾಯದಿರು
ತೀರಿಸುವೆನು ಮೌನದಿ
ನಿನ್ನೊಲವ ಹರಕೆ!

                                                                                                            --ಮಂಜು ಹಿಚ್ಕಡ್

Monday, November 19, 2018

ಆಧಾರ


ತಿರುಬೋಕಿ ಬದುಕಿಗೆ 
ನೀನಿರಲು  ಆಧಾರ
ಕಾಪಿಟ್ಟ ಕನಸುಗಳ 
ಮೇಘ ಮಂದಾರ!

-- ಮಂಜು ಹಿಚ್ಕಡ್

Saturday, November 17, 2018

ಹುಡುಕಾಡೋ ಮನವೇ


ಹುಡುಕಾಡೋ ಮನವೇ
ಹುಡುಗಾಟವೇಕೆ !
ಕನಸುಗಳ  ಸಂತೆಯಲಿ
ನೀ ನೂಕುವೆ  ಏಕೆ!

-- ಮಂಜು ಹಿಚ್ಕಡ್

ಮತ್ತದೇ ಪ್ರೀತಿ


ಮತ್ತದೇ ಪ್ರೀತಿ,
ಮತ್ತದೇ ಮುನಿಸು
ಮತ್ತದೇ ಮಾತು,
ಮತ್ತದೇ ಮೌನ

ಮತ್ತೆ ನೀ ಜೊತೆಗಿರಲು! 

-- ಮಂಜು ಹಿಚ್ಕಡ್

Thursday, March 2, 2017

ಸಂಧ್ಯಾಕಾಲ

ಮುತ್ತು ಕೇಳೋಕೆ
ಹೊತ್ತು ಕಳೆಯೋಕೆ
ಇದುವೆ ಸಂಧಿಕಾಲ
ಅದುವೆ ಸಂಧ್ಯಾಕಾಲ
-ಮಂಜು ಹಿಚ್ಕಡ್

Monday, February 13, 2017

ಬಂದು ಜೊತೆಯಾಗದಿರು

ಬರದಿರು,
ಬಂದು
ಜೊತೆಯಾಗದಿರು
ನೀ ನನ್ನ ,

ಕತೆಯಾಗುವೆ
ನೀ,
ನನ್ನ ಜೊತೆ
ಇನ್ನಾರಿಗೋ
ಚಿನ್ನ!

                          -ಮಂಜು ಹಿಚ್ಕಡ್

Sunday, January 17, 2016

ಹೊತ್ತು ನಡೆವವಗೆ ಗೊತ್ತು


ಹೊತ್ತು ನಡೆವವಗೆ ಗೊತ್ತು
ಹೊತ್ತ ವಸ್ತುವಿನ ಭಾರ!
ದುಃಖ ಹೊತ್ತವಗೆ ಗೊತ್ತು
ಕಣ್ಣ ಕಂಬನಿಯ ಭಾರ!

-ಮಂಜು ಹಿಚ್ಕಡ್

Wednesday, August 12, 2015

ಮತ್ತದೇ ಮಳೆ

ಮತ್ತದೇ ಮಳೆ
ಮತ್ತದೇ ನೀರು
ಈಜಿ ಜೈಸುವ ಆಸೆ
ಎಂದಿನಂತೆ
ಮತ್ತೆ ಈ ಮನಕೆ

ನಿನ್ನ ಕಂಡಾಗಲೆಲ್ಲಾ.

-ಮಂಜು ಹಿಚ್ಕಡ್

Tuesday, March 17, 2015

ಹೀಗೊಂದು ಪ್ರಶ್ನೆ!

ಮೋಡವಿರದ ಭಾನಲುಂಟೇ
ಕೋಲುಮಿಂಚಿನ ಆಟವು,
ಪ್ರೀತಿಯಿರದ ಬಾಳಲುಂಟೇ
ಆತ್ಮತೃಪ್ತಿಯ ಭಾವವು.

-ಮಂಜು ಹಿಚ್ಕಡ್

Thursday, March 12, 2015

ಯೋಚಿಸು ಒಮ್ಮೆ!

ಚಾದರವನ್ನೆಳೆದು, ಮುಸುಕನೊದ್ದು
ಮಲಗುವ ಮುನ್ನೊಮ್ಮೆ ಯೋಚಿಸು
ಕಳೆದಿರುವ ನಿನ್ನೆಗಳ ಬಗ್ಗೆ
ಬರಲಿರುವ ನಾಳೆಗಳ ಬಗ್ಗೆ.

ಸರಿದೋಗಬಹುದೇನೋ
ಮನವನಾವರಿಸಿ ಕುಳಿತಿರುವ
ಚಿಂತೆಗಳ ಮುಸುಕು...

--ಮಂಜು ಹಿಚ್ಕಡ್

Wednesday, January 28, 2015

ಅವಳ ಚಲುವಿಗೆ ಸೋತು

ಅವಳ ಚಲುವಿಗೆ ಸೋತು
ಧರೆಗಿಳಿದು ಬಂದ
ಆ ಚಂದಿರನಂದ,
ನನ್ನನ್ನಿರಲೀ, ಅವಳನ್ನಿರಲೀ
ದೂರದಿಂದ ನೋಡಿದರಷ್ಟೇ
ಭಲು ಚಂದ.

-ಮಂಜು ಹಿಚ್ಕಡ್

Friday, December 12, 2014

ಸಂಸಾರ ಸಾಗರದಲ್ಲಿ

ಸಂಸಾರ ಸಾಗರದಲ್ಲಿ
ಇದ್ದು ಜೈಸುತ್ತೇನೆ
ಅನ್ನುವುದಾದರೆ
ಅದಕೆ ಬದ್ದನಾಗು.
ಇಲ್ಲಾ ಇದ್ದುದೆಲ್ಲವ ಬಿಟ್ಟು
ಈಗಲೇ ಬುದ್ದನಾಗು.

--ಮಂಜು ಹಿಚ್ಕಡ್

Tuesday, November 18, 2014

ವಿದ್ಯುತ್ತು

ಏನಿದ್ದರೇನು ನಮ್ಮ ವಿದ್ವತ್ತು
ಮನೆಯಲ್ಲಿದ್ದರೆ ತಾನೇ ವಿದ್ಯುತ್ತು
ಮನೆಗೆ ಬಂದು ಬರೆಯುವ ಚಿಂತೆ
ಮನೆ ತಲುಪುವಷ್ಟರಲ್ಲಿ ವಿದ್ಯುತ್ತೇ ನಾಪತ್ತೆ....


--ಮಂಜು ಹಿಚ್ಕಡ್

Wednesday, November 12, 2014

ಈ ಜೀವನ!

ನಮ್ಮ ಈ ಜೀವನ.
ನೀನಿತ್ತ ಬಿಕ್ಷೆಯೋ,
ನಾನಿತ್ತ ರಕ್ಷೆಯೋ,
ಎಂದು ಹುಡುಕಿ,ಹುಡುಕಿ
ಸವೆದು ಹೋಗಿದೆ
ನನ್ನ ಪಾದರಕ್ಷೆ.

--ಮಂಜು ಹಿಚ್ಕಡ್

Thursday, October 30, 2014

ಎಣ್ಣೆ!

ಚಿಕ್ಕದಿರಲಿ,
ದೊಡ್ಡದಿರಲಿ,
ಬತ್ತಿ, ಹೊತ್ತಿ
ಉರಿಯಲು ಬೇಕು
ಪಾತ್ರೆಯಲ್ಲಿಷ್ಟು ಎಣ್ಣೆ.

--ಮಂಜು ಹಿಚ್ಕಡ್

Saturday, October 11, 2014

ಪಯಣ

ಬೆರಳ ನೇವರಿಸಿ
ಮುಂಗುರುಳು ತೀಡಿ
ಆತರಿಸಿ, ಹುಚ್ಚೆದ್ದು
ಗಮ್ಯ ಸೇರುವ ಹೊತ್ತಿಗೆ
ಸೂರ್ಯ ಕಂತಿದ್ದ
ಚಂದ್ರ ನಕ್ಕಿದ್ದ.

--ಮಂಜು ಹಿಚ್ಕಡ್

Wednesday, September 24, 2014

ಮುತ್ತಿನ ಮತ್ತು.

ಮುತ್ತಿನ ಮತ್ತು
ಬಲು ಗಮ್ಮತ್ತು
ಅದು
ನನ್ನವಳಿಗಾದರೆ

ತಪ್ಪಿ
ಇನ್ನೊಬ್ಬಳಿಗಾದರೆ
ಮೊದಲು
ಕಾದಿಹುದು ಆಪತ್ತು,
ಬಳಿಕ ವಿಪತ್ತು.


--ಮಂಜು ಹಿಚ್ಕಡ್

Sunday, August 31, 2014

ಬೀದಿ ದೀಪ

ಮಧ್ಯಾಹ್ನವಾದರೂ ಉರಿಯುವುದಿಲ್ಲಿ, ಬೀದಿ ದೀಪ
ಹೇಳಿ ಕೊಳ್ಳಬೇಕಾಗಿದೆ, ನಮಗೆ ನಾವೇ ಸಂತಾಪ.
ಹುಣ್ಣಿಮೆಯ ಬೆಳದಿಂಗಳೊಡನೆ, ರಸ್ತೆ ದೀಪಗಳ ಸುಗ್ಗಿ
ಅಮವಾಸ್ಯೆ ಬಂದರೆ ಹುಡುಕಬೇಕು ರಸ್ತೆ, ತಗ್ಗಿ ಬಗ್ಗಿ!

--ಮಂಜು ಹಿಚ್ಕಡ್

Wednesday, August 6, 2014

ನಾಚಿದ ಅವಳ ಮುಖ!

ನಾಚಿ ತಗ್ಗಿಸಿದ
ಅವಳ ಮುಖ
ಇಳಿ ಸಂಜೆಯ
ನಾಚಿಕೆ ಮುಳ್ಳಿನ
ಎಲೆಯಂತೆ.

--ಮಂಜು ಹಿಚ್ಕಡ್