ಸ್ವಾತಂತ್ರವೋ, ಪಾರತಂತ್ರ್ಯವೋ!
Our social:

Wednesday, August 14, 2013

ಸ್ವಾತಂತ್ರವೋ, ಪಾರತಂತ್ರ್ಯವೋ!


ಇತ್ತ ಜಾತಿಯತೆಯ ಮಂತ್ರ
ಅತ್ತ ಕೋಮುವಾದದ ತಂತ್ರ
ಕಳೆದು ಹೋಗಿದೆ ನಡುವೆ
ನಲ್ವತ್ತೇಳರ ಸ್ವಾತಂತ್ರ.

ಇತ್ತ ಬೆಲೆಯೇರಿಕೆಯ ಕಾವು
ಅತ್ತ ರೂಪಾಯಿ ಅಪಮೌಲ್ಯದ ನೋವು
ನಡುವೆ ಕೇಳುವವರಿಲ್ಲ
ಬಡ ಜನರ ಸಾವು ನೋವು.

ಇಲ್ಲಿ ಮಳೆ ಬಂದು ಅತಿವ್ರಷ್ಠಿ,
ಅಲ್ಲಿ ಮಳೆ ಬಾರದೇ ಅನಾವ್ರಷ್ಠಿ
ನಡುವೆ ಗಡಿಯಲ್ಲಿ,
ಪಾಕಿಸ್ಥಾನದ ವಕ್ರದ್ರಷ್ಟಿ.

ಇಲ್ಲಿ ಓಟಿನ ಮಂತ್ರ
ಆಲ್ಲಿ ನೋಟಿನ ತಂತ್ರ
ನಡೆದಿದೆ ನಡುವೆ
ರಾಜಕಿಯದ ಕುತಂತ್ರ.

ಅಲ್ಲಿ ಕೊಲೆಯಂತೆ 
ಇಲ್ಲಿ ಸುಲಿಗೆಯೂ ಅಂತೆ,
ಮುಂದೆನಿತೋ ಎನ್ನುವುದೇ
ದಿನ ನಿತ್ಯದ ಚಿಂತೆ.

ಧ್ವೇಷ ದಳ್ಳುರಿಯಲ್ಲಿ
ಕಳೆದು ಹೋಗಿದೆ ಸ್ವಾತಂತ್ರ.
ನಮ್ಮ ಬಾಳು ಅತಂತ್ರ.
ಒಟ್ಟಿನಲಿ ನಾವು ಪರತಂತ್ರ.

       --ಮಂಜು ಹಿಚ್ಕಡ್ 

0 comments:

Post a Comment