ನನ್ನ ಕವಿತೆ...
ಬರೆದಂತೆ ಬರಿದಾಗಲು ಇದು ಕೇವಲ ಲೇಖನಿಯಲ್ಲ
ಕೂಗಿ ಕೂಗಿ ಹೇಳಲು ಧ್ವನಿವರ್ಧಕವೂ ಅಲ್ಲ.
ಮೌನ ಮಾತನಾಡಿದಾಗ ಮೂಡಿದ ಶಬ್ಧಗಳ ಮೋಡಿ
ಆರಿಸಿ ಆರಿಸಿ ತೆಗೆದ ಪ್ರಾಸಗಳ ಜೋಡಿ.
ಭಾವನೆಗಳು ಮೈ-ಮನದಿ ಮೇಳೈಸಿದೊಡೆ ಇದರ ಜನನ
ನಲಿವು-ನೋವು, ಹರ್ಷ-ಸ್ಪರ್ಷ ಹೀಗೆ ಹತ್ತು ಹಲವು ಕವನ.
ಹಗಲಿರಲಿ, ಇರುಳಿರಲಿ ಮನವು ಬಯಸಿದರೆ ಕವಿತೆ
ಬಡವನಿರಲಿ, ಬಲ್ಲಿದನಿರಲಿ ಎಲ್ಲರಲ್ಲಿಯೂ ಸಮನಾದ ಮಮತೆ.
ಎಂದು ಹುಟ್ಟಿತು, ಹೇಗೆ ಹುಟ್ಟಿತು ಎನ್ನುವುದಲ್ಲ ಮುಖ್ಯ
ಏನು ಓದಿದಿರಿ, ಏನರ್ಥವಾಯಿತು ಎನ್ನುವುದೇ ಪ್ರಾಮುಖ್ಯ
ಎಲ್ಲರಿಗೂ ಒಳಿತಾಗಲಿ ಎನ್ನುವುದು ಕವಿತೆಗಳ ಭಾವಾರ್ಥ
ಓದಿ ಹಾರೈಸಿದರೆ ಸಾಕು ನಾನು ಕ್ರತಾರ್ಥ!
-- ಮಂಜು ಹಿಚ್ಕಡ್
tumba chennagide manju keep it up......
ReplyDeletenice 1 manjann.
ReplyDeleteKlasse !!!
ReplyDeleteಧನ್ಯವಾದಗಳು...
ReplyDelete