ನೆನಪು..
ಮನವೇಕೋ ನೆನೆಯುತಿದೆ
ಅಂದು ಮರೆತ ಹುಡುಗಿಯ
ಮಾಡಬಾರದ ವಯಸ್ಸಿನಲ್ಲಿ
ಮಾಡಿದಾಗಿನ ಪ್ರೀತಿಯ.
ಆಡಿದ ಆಟಗಳೆಷ್ಟು,
ಮಾತನಾಡಿದ ಮಾತುಗಳೆಷ್ಟು,
ಮರಳಿ ಮರಳಿ ಬರುತಿದೆ
ನೆನಪ ಬಗೆದಷ್ಟು.
ತಿಳಿಯಲಾರದ ವಯಸ್ಸು,
ಅರಿಯಲಾರದ ಮನಸ್ಸು
ಮನದ ಮೂಲೆಯಲ್ಲಿತ್ತು,
ಸಾವಿರ-ಸಾವಿರ ಕನಸು.
ಅಂದು ಆ ನಿನ್ನ ಸ್ಪರ್ಷ,
ಮನದಿ ಮುಡಿಸಿತ್ತು ಹರ್ಷ
ಇಂದು ನೆನೆದರೆ ಅನಿಸುವುದು,
ಈ ಬಾಳು ನಿಶ್ಯೇಷ
ಅಂದು ನೀ ನನ್ನ
ಅಗಲಿದ ಆ ಒಂದು ಕ್ಷಣ
ನನ್ನ ಮನಸು ಮೌನ
ಮಾತು ಮರಣ.
ಕಳೆದು ಹೋದ ಜೀವನ
ನೆನೆದರೆ ಏನುಂಟು?
ಈ ಬಾಳ ಸಂತೆಯಲಿ
ಒಂದಲ್ಲ ಹಲವುಂಟು
ನಡೆದುದ್ದೆಲ್ಲ ನೆನೆದು ನಡೆದರೆ,
ಹೇಗೆ ಸಾಗಿತು ಜೀವನ?
ಗತಿಸಿದ್ದೆಲ್ಲ ಮರೆತು ನಡೆದರೆ
ತಣ್ಣಗಿರುವುದು ಈ ಮೈ ಮನ.
-- ಮಂಜು ಹಿಚ್ಕಡ್
0 comments:
Post a Comment