Saturday, January 4, 2014

ಬೆಳ್ಳಗಿರುವುದೆಲ್ಲಾ ಹಾಲಲ್ಲ..

ಬಣ್ಣ ಕಪ್ಪಿರಬಹುದು
ಹಾಗಂತ ಕಾಗೆ ಕೋಗಿಲೆಯಲ್ಲ
ಮುಖಚರ್ಯೆ ಹೋಲುತಿರಬಹದು
ಹಾಗಂತ ಬೆಕ್ಕು ಹುಲಿಯಲ್ಲ.

ದಾನಿಯ ಮುಖವಾಡ ಹೊತ್ತವರೆಲ್ಲ
ದಾನಶೂರ ಕರ್ಣರೆನ್ನುವುದು ಸಲ್ಲ
ಮುಖವಾಡ ಕಳಚಿ ಎಸೆಯಬಹುದು
ಆದರೆ ನೈಜತೆಯನ್ನಲ್ಲ.

ಬಣ್ಣ ಬಣ್ಣದ ಪೋಷಾಕು
ತೊಟ್ಟು ಪೋಸು ಕೊಟ್ಟೊಡನೆ
ಆತನನ್ನು ಪೋಷಕ ಎನ್ನಲಾದಿತೇ?

ಸಿಂಹಾಸನ ಏರಿದವರನ್ನೆಲ್ಲಾ
ಸಿಂಹ ಎನ್ನುವುದಾದರೆ
ಒಂದೊಮ್ಮೆ ನಾಯಿ
ಸಿಂಹಾಸನ ಏರಿದರೆ
ಆ ಶ್ವಾನಕ್ಕೂ ಸಿಂಹ ಎನ್ನಲಾದಿತೇ?

ಬೆಳ್ಳಗಿರುವುದೆಲ್ಲಾ ಹಾಲಾಗುವುದಾದರೆ
ಸುಣ್ಣದ ನೀರು ಕೂಡ ಬೆಳ್ಳಗಿಹುದಲ್ಲಾ.

ಮುಖವ ಮೆತ್ತಿದ ಬಣ್ಣದ ಲೇಪ
ಬೆವರಿಂದ ಅಳಿಸಿ ಹೋದಾಗ
ಅದೇ ಬೂದಿ ಮುಚ್ಚಿದ
ಇದ್ದಲಿಯ ಬಣ್ಣ
ಸುಣ್ಣದಂತಿರಲು ಸಾಧ್ಯವಿಲ್ಲವಲ್ಲ..

--ಮಂಜು ಹಿಚ್ಕಡ್

No comments:

Post a Comment