Saturday, January 25, 2014

ಹೀಗೊಂದು ಕೋರಿಕೆ!

ಗಿಡವಿರಬಹುದು ನಾನು,
ಕಿತ್ತು ಎಸೆಯದಿರು ನನ್ನ.
ಯೋಚಿಸು ಮತ್ತೊಮ್ಮೆ
ಚಿವುಟಿ ಎಸೆಯುವ ಮುನ್ನ.

ಬೆಳೆದು ದೊಡ್ಡದಾಗಿ ಕೊಡುವೆ
ನಾ ನಿನಗೆ ಹಣ್ಣನ್ನ.
ಒಂದೊಮ್ಮೆ ಹಣ್ಣಿಲ್ಲದೇ ಇದ್ದರೂ
ಕಾಯುವೆ ನೆರಳಾಗಿ ನಾನಿನ್ನ.

ಕತ್ತರಸಿ ಎಸೆಯದಿರು ಚಿನ್ನ
ನನ್ನ ಅಂಗಾಂಗಗಳನ್ನ
ನಾ ಬದುಕಿ ಬಾಳಿದರೆ ತಾನೆ
ನಿನ್ನ ಬದುಕು ಸಂಪನ್ನ.

ನಾನಿರಲು ನಿನಗೆ
ಒಂದಲ್ಲ ಎರಡಲ್ಲ
ಹಲವಾರು ಉಪಯೋಗ
ಕತ್ತರಿಸಿ ಅನುಭವಿಸದಿರು
ಕ್ಷಣಿಕ ವೈಭೊಗ.

ನೀ ಬೆಳೆದು ಬೆಳೆಸು
ನಿನ್ನ ಜೊತೆಯಲ್ಲೇ
ಮೋಡ ನಿಲ್ಲಿಸಿ, ಮಳೆ ಸುರಿಸಿ
ಕಾಪಾಡುವೆ ನಿನ್ನ
ನನ್ನ ನೆರಳಲ್ಲೇ.

ನೀನೂ ಬೆಳೆದು ನಿಲ್ಲು.
ಜೊತೆಗೆ ನನ್ನವರನು ಬೆಳೆಸು
ಇಂದಿಲ್ಲದಿದ್ದರೇನಂತೆ ಮುಂದೊಮ್ಮೆ
ನನಸಾಗುವುದು ನಿನ್ನ ಕನಸು.

--ಮಂಜು ಹಿಚ್ಕಡ್

No comments:

Post a Comment