Monday, March 31, 2014

ನಾ ಬಯಸಿದ ಪ್ರೀತಿ!

ನಾ ಬಯಸಿದ ಆಕೆಯ ಪ್ರೀತಿಯೆಲ್ಲವೂ
ಕಡಲ ಒಡಲಾಳದೊಳಗೆ ಹುದುಗಿದ
ಮುತ್ತುಗಳ ರಾಶಿಯಂತೆ,
ಮೊಗೆದಷ್ಟು, ಬಗೆದಷ್ಟು
ಬರುತ್ತಲೇ ಇರುವವು
ಆಕೆಯ ಒಡಲಾಳದಿಂದ

--ಮಂಜು ಹಿಚ್ಕಡ್

Friday, March 28, 2014

ಬರೆದ ಸಾಲುಗಳು ಸೊರಗಿದಾಗ

ತುಂಬು ಮನಸ್ಸಿಂದ
ಬರೆದ ಸಾಲುಗಳಲ್ಲವೂ
ಸೊರಗಿ ಸುಣ್ಣವಾದಾಗ
ಗೀಚಿದ ಬಿಳಿಹಾಳೆಯೂ
ಮೂಗು ಒರೆಸಿ
ಎಸೆದ ಕರವಸ್ತ್ರದಂತೆ
ಬಾಸವಾಗುವುದು.

--ಮಂಜು ಹಿಚ್ಕಡ್