ಅದು ತೊಂಬತ್ತರ ದಶಕದ ಕೊನೆಯ ಸಾಲುಗಳು, ಆಗಿನ್ನೂ ನಾವು ಅ-ಅರಸ, ಆ- ಆನೆ ಎನ್ನುವ ಕನ್ನಡ ಅಕ್ಷರಮಾಲೆಗಳನ್ನು ಕಲಿಯುತಿದ್ದ ಕಾಲ. ಸ್ಲೇಟು ಬಳಪಗಳಲ್ಲೇ ನಮ್ಮ ಬರವಣಿಗೆ. ಆಗಿನ್ನೂ ಈಗಿನಂತೆ ಪೆನ್ಸಿಲ್ ನೋಟ್ ಬುಕ್ಕುಗಳಿರಲಿಲ್ಲ. ಆಗೀನ ಕಾಲಕ್ಕೆ ನಮಗೆ ವರ್ಷಕ್ಕೊಂದು ಹೊಸ ಸ್ಲೇಟು ಸಿಗುತಿದ್ದುದು ಅಪರೂಪವೇ. ಒಮ್ಮೊಮ್ಮೆ ಅರ್ಧ ಗೀರುಬಿಟ್ಟ ಇಲ್ಲವೇ ತುದಿ ಮುಕ್ಕಾದ ಸ್ಲೇಟಿನಲ್ಲಿಯೇ ಕಾಲ ಕಳೆದಿದ್ದು ಇದೆ. ನನಗೆ ನೆನಪಿರುವ ಪ್ರಕಾರ ಆಗಿನ್ನೂ ಬಳಪಕ್ಕೆ ಅಬ್ಬಬ್ಬಾ ಎಂದರೆ ಐದು ಪೈಸೆ ಇರಬಹುದೇನೋ. ಅಂತಹ ಒಂದೆರೆಡು ಬಳಪಕೊಂಡರೆ ಅದು ನಮಗೆ ಒಂದು ವಾರಕ್ಕಾದರೂ ಆಗಬೇಕು. ಅದೇನಾದರೂ ಒಂದೈದು ದಿನದೊಳಗೆ ಕಳೆದೋಗಿ ಅಥವಾ ಕಾಲಿಯಾಗಿ ನಾವೇನಾದರು ಇನ್ನೊಂದು ಬಳಪ ಬೇಕೆಂದರೆ ನಮ್ಮ ತಂದೆಯವರು ಕೋಪದಿಂದ ಕುದಿದು ಬಿಡುತಿದ್ದರು. "ನೀವೇನು ಬಳಪವನ್ನು ಬರೆಯಲು ಉಪಯೋಗಿಸುತ್ತಿರೋ ಅಥವಾ ತಿನ್ನುತ್ತಿರೋ, ವಾರಕ್ಕೊಂದು ಬಳಪ ಸಾಲುವುದಿಲ್ಲವೇ? ಅದೇನು ಸುಮ್ಮನೆ ಬರುತ್ತದಯೇ? ಕಾಸು ಕೊಡಬೇಡವೇ?" ಹೀಗೆ ಒಂದರ್ಧ ಗಂಟೆಯ ಭಾಷಣ. ಅದು ಕೂಡ ಅಷ್ಟೇ ಹೊತ್ತು, ಆಮೇಲೆ ತಾವೇ ಹೋಗಿ ಬಳಪ ತಂದು ಕೊಡುತಿದ್ದರು. ಆ ಕಾಲ ಕೂಡ ಹಾಗೆಯೇ ಇತ್ತು ಬಿಡಿ.
ಆಗೆಲ್ಲ ನಮ್ಮ ತಂದೆ, ನಾವೇನಾದ್ರೂ ಬೇಕು ಎಂದು ಕೇಳಿ, ಕೋಪಗೊಂಡು ಬಯ್ಯುವಾಗಲೆಲ್ಲ, ನಮಗೆ ಅವರೇಕೆ ಹೀಗೆ ಬಯ್ಯುತ್ತಾರೆ? ನಾವೇನು ಬೇಕಂತಲೇ ಕೇಳುತ್ತೇವೆಯೇ? ಎಂದು ನಮ್ಮಲ್ಲೇ ಅಂದು ಕೊಳ್ಳುತಿದ್ದೇವೆಯೇ ಹೊರತು ಅವರು ನಮಗಾಗಿ ಶ್ರಮಿಸುತ್ತಿರುವುದರ ಬಗ್ಗೆಯಾಗಲೀ, ನಮಗಾಗಿ ಕಷ್ಟಪಡುವುದರ ಬಗ್ಗೆಯಾಗಲೀ ಆಸಕ್ತಿ ಇರಲಿಲ್ಲ. ನಮಗಾಗ ನಮ್ಮ ಕೆಲಸವಾಗ ಬೇಕಷ್ಟೇ. ಹೇಗೆ ಆಗುತ್ತದೆ ಎನ್ನುವುದು ಮುಖ್ಯವಾಗಿರಿಲಿಲ್ಲ, ಅದರ ಅವಶ್ಯಕತೆಯೂ ನಮಗಿರಲಿಲ್ಲ.
ಮುಂದೆ ದೊಡ್ಡವರಾಗುತ್ತಾ ಹೋದ ಹಾಗೆ ಅದು ಬೇಕು, ಇದು ಬೇಕು ಎನ್ನುವ ನಮ್ಮ ಬೇಡಿಕೆಗಳು ಕಾಲಕ್ಕನುಗುಣವಾಗಿ, ವಯಸ್ಸಿಗೆ ಅನುಗುಣವಾಗಿ, ನಾವು ಓದುತ್ತಿರುವ ತರಗತಿಗಳಿಗೆ ಅನುಗುಣವಾಗಿ ಬೆಳೆಯುತ್ತಲೇ ಹೋಯಿತೇ ಹೊರತು ಅದೆಂದು ಕೊನೆಯಾಗಲಿಲ್ಲ. ತಂದೆ ನಮಗಾಗಿ ಶ್ರಮ ಪಡುತ್ತಿದ್ದಾರೆ ಎಂದು ಒಮ್ಮೊಮ್ಮೆ ಎಂದನಿಸಿದರೂ, ಅದು ಕೇಳುವಾಗ ಇರುತ್ತಿರಲಿಲ್ಲ, ಅದು ನಮಗೆ ಆಗ ಅರ್ಥವಾಗುತ್ತಲು ಇರಲಿಲ್ಲ.
ಈಗ ಬೆಳೆದು ದೊಡ್ಡವನಾಗಿದ್ದೇನೆ, ನನಗೂ ಮದುವೆಯಾಗಿ ಮಗು ಇದೆ. ಮಗು ಇನ್ನೂ ಯುಕೇಜಿ, ಪ್ರಾಥಮಿಕ ಶಿಕ್ಷಣಕ್ಕೆ ಕಾಲಿಡಲು ಇನ್ನೂ ಮೂರು ತಿಂಗಳ ಸಮಯ ಬಾಕಿ ಇದೆ. ಆಗಿನಂತೆ ಇದು ಸ್ಲೇಟು ಬಳಪಗಳ ಕಾಲವಲ್ಲ. ಪೆನ್ನು, ಪೆನ್ಸಿಲ್, ನೋಟ್ ಬುಕ್ ಗಳ ಕಾಲ. ಆಗ ನಾವು ಐದನೇ ತರಗತಿಗೆ ಸೇರಿದಾಗಲೇ ನೋಟ್ ಬುಕ್ಕನ್ನ ಹಿಡಿದು ಬರೆಯಲು ಪ್ರಾರಂಭಿಸಿದ್ದು. ಆದರೆ ಈಗ ನರ್ಸರಿಯಿಂದಲೇ ನೋಟ್ ಬುಕ್. ಅದು ಕೂಡ ಒಂದೊಂದು ವಿಷಯಕ್ಕೆ ಒಂದೊಂದು. ಆಗ ನಾವು ವಾರಕ್ಕೊಂದು ಬಳಪ ಬಳಸಿದರೆ, ಈಗ ನನ್ನ ಮಗುಗೆ ವಾರಕ್ಕೊಂದು ಪೆನ್ಸಿಲ್ ಸಾಲುವುದಿಲ್ಲ. ಇನ್ನೂ ಬಣ್ಣದ ಪೆನ್ಸಿಲಗಳನ್ನು ನಾವು ನೊಡಿದ್ದು ಕಾಲೇಜು ಮೆಟ್ಟಿಲು ಏರಿದಾಗಲೇ. ಈಗ ನರ್ಸರಿಯಿಂದಲೇ ಅದರ ಉಪಯೋಗ. ನಮಗೆ ಶಾಲೆ ಸುರುವಾದಾಗ ತಂದು ಕೊಡುತಿದ್ದ ಪಠ್ಯ ಪುಸ್ತಕಗಳು ಆ ಕ್ಲಾಸು ಮುಗಿಯುವವರೆಗು ಸಾಲುತಿತ್ತು. ಅಪರೂಪಕ್ಕೆ ಒಮ್ಮೆ ಎಂಬಂತೆ ನಾವು ಕೊಳ್ಳುತ್ತಿದ್ದುದು ಬಳಪ ಇಲ್ಲವೇ, ೩೫ ಪೈಸೆಯ ಪೆನ್ನಿನ ರಿಪೀಲ್. ಒಮ್ಮೆ ಒಂದು ಪೆನ್ನನ್ನು ಕೊಂಡರೆ ಒಂದೆರಡು ವರ್ಷ ಆ ಪೆನ್ನಿಗೆ ರಿಪೀಲ್ಲೇ ಗತಿ. ಒಮ್ಮೊಮ್ಮೆ ಪೆನ್ನು ಕಳೆದು ಹೋದರೆ, ಇಲ್ಲ ಬಿದ್ದು ಒಡೆದು ಹೋದರೆ ಅಥವಾ ಇನ್ನೂ ಅದನ್ನು ಹಿಡಿದು ಬರೆಯಲು ಸಾದ್ಯವೇ ಇಲ್ಲವೆಂದಾಗ ಮಾತ್ರ ಇನ್ನೊಂದು ಪೆನ್ನಿಗೆ ಮೊರೆ ಹೋಗುತಿದ್ದುದು. ಆದರೆ ಇಂದು ಆ ಕಾಲವೆಲ್ಲಿ, ಪೆನ್ನು ಕಾಲಿಯಾದ ಮೇಲೆ ರಿಪೀಲ್ ಹಾಕುವ ಮಾತೆಲ್ಲಿ. ಪೆನ್ನಲ್ಲಿಯ ಸಾಹಿ ಮುಗಿಯಲೀ, ಒಡೆದು ಹೋಗಲೀ, ಕಳೆದು ಹೋಗಲೀ, ಇನ್ನೂ ಸಾಹಿ ಕಟ್ಟಿ ಬರೆಯದಂತಾಗದಿರಲೀ ನಮ್ಮ ಮಕ್ಕಳಿಗೆ ಇನ್ನೊಂದು ಪೆನ್ನು ಬೇಕೇ ಬೇಕು.
ಈಗಿನ ಮಕ್ಕಳ ಬೇಡಿಕೆಯನ್ನು ಕೇಳಿದರೆ ಮುಗಿದೇ ಹೋಯಿತು. ಶಾಲೆಯಲ್ಲಿ ಪಕ್ಕದ ವಿದ್ಯಾರ್ಥಿ ಏನು ತರುತ್ತಾಳೋ ಅದೇ ರೀತಿಯ ವಸ್ತುಗಳು ಬೇಕು. ಪಕ್ಕದ ಹುಡುಗಿ ಕೆಂಪು ಬಣ್ಣದ ಬಾಟಲ್ ತಂದರೆ, ನಮ್ಮ ಮಕ್ಕಳು ಅದೇ ದಿನ ಬಂದು ಹೇಳುತ್ತಾರೆ, "I don't want this blue color bottle, I want a red color one." (ನನಗೆ ನೀಲಿ ಬಣ್ಣದ ಬಾಟಲ್ ಬೇಡ, ಕೆಂಪು ಬಣ್ಣದ ಬಾಟಲ್ ಬೇಕು ಅಂತಾ. ಅದು ಕುಡ ಈ ಕೂಡಲೇ. ಇಲ್ಲವೆಂದರೆ ಮುಗಿಯಿತು ಅಪ್ಪ ಅಮ್ಮ ಕೆಲಸ ಮಾಡಿದ ಹಾಗೆಯೇ. ಆ ಕೂಡಲೇ ಹತ್ತಿರದ ವಾಣಿಜ್ಯ ಮಳಿಗೆಗೆ ದೌಡಾಯಿಸಿ ಕೊಂಡು ತಂದಾಗಲೇ ಸಮಾಧಾನ. ನಾಳೆ ಇನ್ನೊಬ್ಬಳು ಇನ್ನಾವುದೋ ಬಣ್ಣದ ಊಟದ ಡಬ್ಬ ತಂದರೆ ಇವರಿಗೆ ನಾಳೆ ಅದು ಬೇಕು.
ಅಪ್ಪ ಏನು ಮಾಡುತ್ತಾನೆ, ಹೇಗೆ ತರುತ್ತಾನೆ ಎಲ್ಲಿಂದ ತರುತ್ತಾನೆ ಅದೆಲ್ಲ ಅವರಿಗೆ ಬೇಕಿಲ್ಲ. ಅವರಿಗೆ ಬೇಕಿರುವುದಿಷ್ಟೇ ಪಕ್ಕದಲ್ಲಿರುವ ವಿದ್ಯಾರ್ಥಿಯ ಬಳಿಯಿರುವಂತಹ ವಸ್ತುಗಳು ಅವರಿಗೂ ಬೇಕು. ಅದನ್ನು ಅಪ್ಪ ಕೇಳಿದಾಗಲೆಲ್ಲ ತಂದು ಕೊಡಬೇಕು ಅಷ್ಟೇ. ಒಂದು ಕಾಲದಲ್ಲಿ ಇದೇ ರೀತಿ ನಮಗನಿಸುತಿದ್ದುದು ನಿಜ. ಪಕ್ಕದ ವಿದ್ಯಾರ್ಥಿ ಹೊಸ ರೀತಿಯ ಪೆನ್ನು ಕೊಡರೆ ನಮಗೂ ಆಸೆಯಾಗಿ, ಕೇಳಿ ಮನೆಯಲ್ಲಿ ಬೈಸಿಕೊಂಡು ಸುಮ್ಮನಾಗುತಿದ್ದೆವು. ನಾವು ಬೈಸಿಕೊಂಡು ಸುಮ್ಮನಾಗುತಿದ್ದೆವು ಆದರೆ ಈಗ ನಮ್ಮ ಮಕ್ಕಳು ಹಾಗಲ್ಲ ಎಷ್ಟು ಬೈದರು ಅಷ್ಟೇ, ಅವರು ಆಸೆ ಪಟ್ಟಿದ್ದು ಬೇಕೇ ಬೇಕು.
ಅಂದು ನಮಗೇನಾದರೂ ಬೇಕಿದ್ದಲ್ಲಿ ನಾವು ನಮ್ಮ ತಂದೆಯ ಬಗ್ಗೆ ಯೋಚಿಸದೇ ಅವರನ್ನು ಕೇಳುತಿದ್ದೆವು, ಈಗ ನನ್ನ ಮಗಳು ಕೂಡ ನನ್ನನ್ನು ಕೇಳುತ್ತಾಳೆ ನನ್ನ ಬಗ್ಗೆ ಯೋಚಿಸದೇ. ಅಪ್ಪನ ಸ್ಥಿತಿ, ಪರಿಸ್ಥಿತಿ ಏನು ಎನ್ನುವುದು ಅಪ್ಪನಾದಾಗಲೇ ಗೊತ್ತಾಗುತ್ತಯಲ್ಲವೇ?
--ಮಂಜು ಹಿಚ್ಕಡ್

No comments:
Post a Comment